ಸಾಲು ಬೆಟ್ಟಗಳಿಂದ ಸುತ್ತುವರಿದ, ದಟ್ಟ ಅರಣ್ಯದ ಮಧ್ಯದಲ್ಲಿ ಜಲಪಾತದ ಗುಹೆಯ ಮಧ್ಯೆ ಕಂಗೊಳಿಸುವ ಪ್ರಾಚೀನ ಗವಿಸಿದ್ದಲಿಂಗೇಶ್ವರ ದೇವಸ್ಥಾನ ಯಾದಗಿರಿಯಿಂದ ಪೂರ್ವಕ್ಕೆ 20 ಕಿ.ಮೀ. ದೂರದಲ್ಲಿದೆ. ಲಿಂಗರೂಪಿ ಶಿವನ ಗುಹಾಂತರ ದೇವಸ್ಥಾನ ಇದಾಗಿದ್ದು,
ಶ್ರೀ ಮಹಾತ್ಮ ಗವಿಸಿದ್ಧಲಿಂಗನು ಐಕ್ಯವಾದ ಗವಿಯಲ್ಲಿ ಗೋಲಾದಲಿಂಗವಿದ್ದು ಮೇಲ್ಗಡೆ ನೈಸಗರ್ಿಕವಾದಸಪ್ತ ಹೆಡೆಯ ಸರ್ಪದಾಕಾರ ಕಾಣಿಸುತ್ತದೆ. ವರ್ಷದ ಎಲ್ಲಾ ದಿನಗಳಲ್ಲಿಗವಿಯ ಮೇಲ್ಭಾಗದಿಂದ ಹರಿಯುವ ಜಲಪಾತದ ಉಗಮ ಸ್ಥಾನ ಎಲ್ಲೂ ಕಾಣಿಸುವುದಿಲ್ಲ ಸದಾ ಹರಿಯುವ ನೀರು ಸುತ್ತ ಕಾನನ ಇದು ಮಹಾತ್ಮ
ಶ್ರೀ ಸಿದ್ಧಲಿಂಗೇಶ್ವರನ ಹಾಗೂ ಪ್ರಕೃತಿಯ ವಿಸ್ಮಯ ಸೃಷ್ಠಿ.ಪ್ರತಿ ವರ್ಷ ಭರತ ಹುಣ್ಣಿಮೆಯಂದು ಇಲ್ಲಿ ಜಾತ್ರೆ ನೆಡೆಯುತ್ತದೆ. ವಿಶಿಷ್ಠ ಅನುಭವ ನೀಡುವ ತಾಣವಿದಾಗಿದೆ
Hello There!If you like this article Share with your friend using