ಕಂದಕೂರು ಗ್ರಾಮದಲ್ಲಿ ಪಂಚಮಿ ದಿನ ಚೇಳು ದೇವಿ "ಕೊಂಡಮಾಯಿ"ಗೇ ವಿಶೇಷ ಪೂಜೆ.
ಸಂಗ್ರಹಯಾದಗಿರಿ ತಾಲ್ಲೂಕಿನ ಕಂದಕೂರು ಚೇಳುಗಳ ತವರೆಂದೇ ಪ್ರಸಿದ್ಧಿ. ಇಲ್ಲಿ ಚೇಳುಗಳ ಕುರಿತು `ಚಳುಕು' ಬರಿಸುವ ಕಥೆಗಳಿಲ್ಲ; ಪೂಜ್ಯ ಭಾವನೆಯ ದಂತಕಥೆಗಳಿವೆ! ಗ್ರಾಮಸ್ಥರು ವಿಷಕಾರಿ ಚೇಳುಗಳನ್ನು ದೇವರೆಂದು ಪೂಜಿಸುತ್ತಾರೆ; ಹಾರದಂತೆ ಚೇಳು ಮಾಲೆ ಧರಿಸುತ್ತಾರೆ!
ಯಾದಗಿರಿ ತಾಲ್ಲೂಕಿನ ಕಂದಕೂರು ಒಂದು ಪುಟ್ಟ ಗ್ರಾಮ. ಪ್ರಕೃತಿಯ ರಮ್ಯ ಪರಿಸರದ ಮಧ್ಯೆ ತಲೆ ಎತ್ತಿ ನಿಂತ ಸುಂದರ ಊರು.
ಊರಿನ ಪಕ್ಕದಲ್ಲಿರುವ 'ಈ ಗುಡ್ಡದಲ್ಲಿ ಕೆಂಪು ಚೇಳು, ಕಬ್ಬಿಣ ಚೇಳು (ಕರಿ ಚೇಳು) ಅನೇಕ ಚೇಳುಗಳಿವೆ. ಆದರೆ ಅವು ಕಚ್ಚುವುದಿಲ್ಲ'! ದೇಶದ ಯಾವ ಮೂಲೆಯಲ್ಲಿ ಇಲ್ಲದ ಚೇಳಿನ ದೇವಾಲಯ ಕಂದಕೂರಿನಲಿದೆ. ಇಲ್ಲಿ ಚೇಳು ಹಾಗೂ ಪಾದುಕೆಗೆ ಗ್ರಾಮಸ್ಥರಿಂದ ಪಂಚಮಿ ದಿನ ವಿಶೇಷ ಪೂಜೆ ನಡೆಯುತ್ತಿದೆ.
ಕಂದಕೂರು ಸುಮಾರು 800 ಕುಟುಂಬಗಳು ವಾಸಿಸುವ ಪುಟ್ಟ ಊರು. ಎರಡು ಕಾರಣಕ್ಕೆ ಇದು ಪ್ರಸಿದ್ಧ. ಒಂದು ಚೇಳು.
ಈ ಊರಿನ ಸುತ್ತ ಹಲವಾರು ಗುಡ್ಡಗಳಿವೆ. ಆದರೆ ಕೊಂಡಮಾಯಿ ಬೆಟ್ಟದಲ್ಲಿ ಮಾತ್ರ ಪ್ರತಿ ಕಲ್ಲಿನ ಸಂದಿಯಲ್ಲೂ ಚೇಳುಗಳು ವಾಸ ಮಾಡುತ್ತವೆ. ಅವು ಪಂಚಮಿ ದಿನ ಮಾತ್ರ ಕಚ್ಚುವುದಿಲ್ಲ ಎಂಬುದು ಜನರ ನಂಬಿಕೆ. ಉಳಿದ ದಿನ ಕಚ್ಚಿದರೆ ದೇವಿಯ ಹೆಸರನ್ನು ನೆನೆದು ಅಂಗಾರ (ಬೂದಿ) ಹಚ್ಚಿಕೊಂಡರೆ ನೋವು ಮಾಯವಾಗುತ್ತದೆ ಎನ್ನುವ ನಂಬಿಕೆಯಿದೆ.
ಈ ಪರಂಪರೆ ಐವತ್ತು ವರ್ಷಗಳಿಂದಲೂ ನಡೆದು ಕೊಂಡು ಬರುತ್ತಾ ಇದೆ. ಚೇಳುಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲರುವ ಕಾರಣ ನಮಗೆ ತಿಳಿಯದು. ಕೆಲವು ವಿದೇಶಿಯರೂ ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಆದರೆ ಈ ವಿಚಿತ್ರ ನಮಗೆ ಇನ್ನೂ ಅರ್ಥವಾಗುತ್ತಿಲ್ಲ' ಎನ್ನತ್ತಾರೆ
ಇಲ್ಲಿನ ಗುಡ್ಡಕ್ಕೂ ಇತರ ಗುಡ್ಡಗಳ ಪರಿಸರಕ್ಕೂ ವ್ಯತ್ಯಾಸವಿದೆ. ತೇವಾಂಶದಿಂದ ಕೂಡಿದ ಹಾಗೂ ಅಪಾರ ಪ್ರಮಾಣದ ಕಲ್ಲು ಗಿಡಿಗಂಟಿಗಳ ಪರಿಸರ ಇಲ್ಲಿದೆ. ಈ ಹಿತಕರ ಪರಿಸರವೇ ಚೇಳುಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣ ಇರಬಹುದೇ? ಆದರೆ ಜನ ಹೇಳೋದೇ ಬೇರೆ. 'ಚೇಳುಗಳ ಕುರಿತು ಜನರ ಪೂಜ್ಯ ಭಾವನೆಯೇ ಅವುಗಳ ವೃದ್ಧಿಗೆ ಕಾರಣ' ಎಂದು ಜನ ಸಾಮಾನ್ಯರಿರಲಿ. ಕೆಲವು ಪ್ರಜ್ಞಾವಂತರೂ ಹೇಳುತ್ತಾರೆ.
ಅದೇನೇ ಇರಲಿ, ಈ ಭಾಗದ ಕೊಂಡಮಾಯಿ ದೇವಿಯ ದರ್ಶನಕ್ಕೆ ಸುತ್ತಮುತ್ತಲಿನ ಪ್ರದೇಶದವರು ಮಾತ್ರವಲ್ಲದೆ, ರಾಜ್ಯದ ಹತ್ತಾರು ಜಿಲ್ಲೆಗಳಿಂದ ಹಾಗೂ ನೆರೆಯ ಆಂಧ್ರಪ್ರದೇಶ ಜನರು ಕೂಡ ಬರುತ್ತಾರೆ. ಚೇಳಿನ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಲೇ ಇದೆ.
courtesy sachin
-post by Abraham Meghanath Belly
Hello There!If you like this article Share with your friend using